ಶ್ರೀ ಜಗದ್ಗುರು ರೇಣುಕಾಚಾರ್ಯ ಮಹಾವಿದ್ಯಾಲಯದ ಕನ್ನಡ ವಿಭಾಗ ಆರಂಭದ ದಿನಗಳಿಂದಲೂ ನಿರಂತರ ಅಧ್ಯಾಪನ, ಅಧ್ಯಯನ, ಸಂಶೋಧನೆಗಳಂಥ ಕ್ರಿಯಾತ್ಮಕ ಮತ್ತು ಸೃಜನಾತ್ಮಕ ಚಟುವಟಿಕೆಗಳಲ್ಲಿ ನಿರತವಾಗಿದೆ. ದಿ.ಪ್ರೊ. ರಾಚಪ್ಪನವರು ಸಂಶೋಧಿಸಿದ ವಚನಕಾರ ಜೇಡರ ದಾಸಿಮಯ್ಯನ ಕಾಲನಿರ್ಣಯ ಮತ್ತು ವಚನಗಳನ್ನು ಕುರಿತ ನಿಖರ ಸಂಶೋಧನೆಗಳು ಕನ್ನಡ ಸಾಹಿತ್ಯ ಚರಿತ್ರೆಗೆ ಪ್ರಮುಖ ಕೊಡುಗೆಗಳು ಎನ್ನಿಸಿಕೊಂಡಿವೆ. ನಾಡಿನ ಹಲವು ವಿಶ್ವವಿದ್ಯಾಲಯಗಳು ರೂಪಿಸುವ ಕನ್ನಡ ಪಠ್ಯಪುಸ್ತಕಗಳ ಸಂಪಾದಕ ಮಂಡಳಿಗಳಲ್ಲಿ ವಿಭಾಗದ ಉಪನ್ಯಾಸಕರು
ನಿರಂತರ ಸೇವೆ ಸಲ್ಲಿಸಿದ್ದಾರೆ. ಮಹಾವಿದ್ಯಾಲಯವು ಕನ್ನಡ ಭಾಷಾ ಬೋಧನೆಯ ಜೊತೆಗೆ ಐಚ್ಛಿಕ ಕನ್ನಡ ಸಂಯೋಜಿತ ಪದವಿಯನ್ನು ಹೊಂದಿದ್ದು ಇಲ್ಲಿಯ ವಿದ್ಯಾರ್ಥಿಗಳು ನಾಡಿನಾದ್ಯಂತ ಆಡಳಿತ ಸೇವೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸಿರುತ್ತಾರೆ.

ಬೋಧನಾ ವಿಧಾನ:

ಶ್ರೀ ಜಗದ್ಗುರು ರೇಣುಕಾಚಾರ್ಯ ಮಹಾವಿದ್ಯಾಲಯದ ಕನ್ನಡ ಮತ್ತು ಐಚ್ಛಿಕ ಕನ್ನಡ ವಿಭಾಗವು ಕಾಲಕ್ಕೆ ತಕ್ಕಂತೆ ಅಧುನೀಕರಣಗೊಂಡಿದ್ದು, ಮುದ್ರಿತ ಪಠ್ಯದ ಜೊತೆಗೆ ಪಿ.ಪಿ.ಟಿ. ಪ್ರಾತ್ಯಕ್ಷಿಕೆ, ವಿಷಯಾಧಾರಿತ ಧ್ವನಿಮುದ್ರಿಕೆಯ ಅಡಕಗಳು, ಮತ್ತು ಮಲ್ಟಿಮೀಡಿಯಾ ಆಧಾರಿತ ಬೋಧನ ತಂತ್ರಗಳನ್ನು ಬಳಸಬಲ್ಲ ಸಮರ್ಥ ಉಪನ್ಯಾಸಕ ವರ್ಗವನ್ನು ಹೊಂದಿದೆ.

ವಿಭಾಗದ ಮೂಲ ಸೌಕರ್ಯಗಳು:

ಭಾಷಾ ವಿಭಾಗವು ಅಧುನೀಕರಣಗೊಂಡಿದ್ದು, ಮುದ್ರಿತ ಪಠ್ಯದ ಜೊತೆಗೆ ಮೂವತ್ತು ಅತ್ಯಾಧುನಿಕ ವೇಗದ ಗಣಕಯಂತ್ರಗಳನ್ನು ಒಳಗೊಂಡ ಭಾಷಾ ಪ್ರಯೋಗಶಾಲೆಯನ್ನು ಸ್ಥಾಪಿಸಲಾಗಿದೆ.

ಪಠ್ಯೇತರ ಚಟುವಟಿಕೆಗಳು:

ಕನ್ನಡ ವಿಭಾಗ ಪಠ್ಯ ಬೋಧನೆಯ ಜೊತೆಯಲ್ಲಿ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗುವಂತೆ ಹಲವು ಪಠ್ಯೇತರ ಪ್ರಮಾಣಪತ್ರ ಆಧಾರಿತ ತರಬೇತಿ (ಸರ್ಟಿಫಿಕೇಟ್‌ ಕೋರ್ಸ್‌)ಚಟುವಟಿಕೆಗಳನ್ನು ನಡೆಸಿಕೊಡು ಬಂದಿರುತ್ತದೆ.

೧. ಕಂಪ್ಯೂಟರ್‌ ಮತ್ತು ಕನ್ನಡ ತಂತ್ರಾಂಶ ತರಬೇತಿ
೨. ನುಡಿ ಕೀಲಿಮಣಿ ತಂತ್ರಾಶ ತರಬೇತಿ
೩. ಸ್ವರಚಿತ ಕವನ ವಾಚನ
೫. ವಿಷಯಾಧಾರಿತ ವಿಶೇಷ ಉಪನ್ಯಾಸ ಮಾಲೆ
6. ಸಂಶೋಧನಾ ಕಮ್ಮಟ
7. ಕನ್ನಡ ಭಾಷೆ, ಸಂಸ್ಕೃತಿಗೆ ಶ್ರಮಿಸಿರುವ ಸಂಘ-ಸಂಸ್ಥೆಗಳಿಗೆ ಭೇಟಿ
8. ಅಂತರಕಾಲೇಜು ವಿದ್ಯಾರ್ಥಿಗಳ ವಿಚಾರ ಸಂಕಿರಣ
09. ರಾಷ್ಟ್ರೀಯ ವಿಚಾರ ಸಂಕಿರಣ

 ಕನ್ನಡ ವಿಭಾಗದ ಬೋಧಕವರ್ಗ: 

ಡಾ. ಶೀಲವಂತಸಂಜೀವಕುಮಾರ್ ಮುಖ್ಯಸ್ಥರು ಎಂ.ಎ, ಎಂ.ಫಿಲ್, ಎನ್‌. ಇ ಟಿ, ಪಿ.ಎಚ್‌ಡಿ.
೨. ಡಾ.ಮಮತಾ ಸಾಲಿಮಠ ಸಹಾಯಕ ಪ್ರಾಧ್ಯಾಪಕರು ಎಂ.ಎ, ಪಿ.ಎಚ್‌ಡಿ.
ಡಾ. ಸತೀಶ್‌ ಜಿ.ಎಸ್‌. ಸಹಾಯಕ ಪ್ರಾಧ್ಯಾಪಕರು ಎಂ.ಎ, ಬಿ.ಎಡ್‌,ಕೆ.ಎಸ್‌ಇಟಿ, ಪಿ.ಎಚ್‌ಡಿ.
ಡಾ. ಮಂಜುನಾಥ ಟಿ. ಸಹಾಯಕ ಪ್ರಾಧ್ಯಾಪಕರು ಎಂ.ಎ, ಬಿ.ಎಡ್‌, ಜೆ.ಆರ್‌ಎಫ್-ಎನ್‌.ಇ.ಟಿ, ,ಪಿ.ಎಚ್‌ಡಿ.
TOP